ಎಐ ಇಮೇಜ್ ಜನರೇಶನ್ - ಸ್ಟುಡಿಯೋಗಿಬ್ಲಿ x ಚಾಟ್ ಜಿಪಿಟಿ
- sushrutha d
- Mar 28, 2025
- 2 min read
Updated: Jun 9, 2025
ಕಲೆಗೊಂದು ಭೂಮಿಕೆ : ಚಾಟ್ ಜಿಪಿಟಿಯ ಮೂಲಕ ಇಮೇಜ್ ಜನರೇಟ್ ಮಾಡಿಕೊಳ್ಳುವ ಅವಕಾಶ ದೊರೆತಾಗಿಂದ ಇಂಟರ್ನೆಟ್ ಪೂರ್ತಿ ಗಿಬ್ಲಿಮಯ. ಸ್ಟುಡಿಯೋಗಿಬ್ಲಿ ಸ್ಟೈಲಲ್ಲಿ ಇಮೇಜ್ ಜನರೇಟ್ ಮಾಡೋ ಲೋರಾಗಳು ಪಬ್ಲಿಕ್ ಡೊಮೈನಿಗೆ ಬಂದು ಸುಮಾರು ಒಂದೂವರೆ ಎರಡು ವರ್ಷಗಳೇ ಆಯ್ತು. ಅವರ ಆನಿಮೇಶನ್ ಮೂವಿಗಳನ್ನೆಲ್ಲ ಬಳಸಿಕೊಂಡು ಟ್ರೈನ್ ಮಾಡಿದ ಲೋರಾವನ್ನು ಸ್ಟೇಬಲ್ ಡಿಫ್ಯೂಶನ್ನಿನ ಇಮೇಜ್ ಜನರೇಶನ್ ಮಾಡೆಲ್‌ಗಳ ಜೊತೆಯಲ್ಲಿ ಯಾರು ಬೇಕಿದ್ದರೂ ಬಳಸಿಕೊಳ್ಳಬಹುದಿತ್ತು. ಸುಮಾರು ಒಂದು ವರ್ಷದ ಹಿಂದೆ ನಾನೂ ಒಂದಷ್ಟು ಬಾರಿ ಅಂತಹ ಹಲವು ಬಗೆಯ ಲೋರಾ ಬಳಸಿಕೊಂಡು ಪ್ರಾಂಪ್ಟ್ ಮೂಲಕ, ಕಸ್ಟಮ್ ವರ್ಕ್‌ಫ್ಲೋ ಮೂಲಕ ಇಮೇಜ್/ವೀಡಿಯೋ ತಯಾರಿಸಹೊರಟದ್ದಿದೆ. ಆದರೆ, ಮುಖ್ಯವಾಗಿ ಸಿಸ್ಟಮ್ ಪವರ್ ಸಾಲದೆ, ಐಡಿಯಾಗಳನ್ನ ಡ್ರಾಪ್ ಮಾಡಬೇಕಾಗಿ ಬಂತು.
ಇಂದೀಗ ಸುಲಭದಲ್ಲಿ ಹೆಚ್ಚು ಯೂಸರ್ ಪ್ರೆಂಡ್ಲಿ ಆದ ಓಪನ್-ಎಐ ಅವರದ್ದೇ ಚಾಟ್‌ಜಿಪಿಟಿಯಲ್ಲಿ ಸಿಂಪಲ್ ಪ್ರಾಂಪ್ಟ್ ಮೂಲಕ ಅದು ಸಾಧ್ಯವಾಗಿದ್ದಕ್ಕೆ, ಜನ ಹುಚ್ಚಿಗೆ ಬಿದ್ದು, ಇಮೇಜ್ ಜನರೇಟ್ ಮಾಡುತ್ತಿರುವುದರಿಂದ ಈ ಸರಿ-ತಪ್ಪು ಚರ್ಚೆ ಎಲ್ಲ! ಆಕ್ಸೆಸ್ಸೆಬಿಲಿಟಿ ಅನ್ನೋದು ಎಷ್ಟು ಮುಖ್ಯ ಅನ್ನೊದಕ್ಕೆ ಒಂದು ಸಿಂಪಲ್ ನಿದರ್ಶನ!
ಆಸ್ ಯೂಶುವಲ್, ಮಿಯೋಜಾಕಿ ಅಜ್ಜನ ಪ್ರಾಯದವರಿಗೆಲ್ಲ ಇದನ್ನು ತಪ್ಪು ಅನ್ನುವುದು ಸುಲಭ. ಅವರಿಗೆ ಇನ್ನೇನೂ ಆಗಬೇಕಾದ್ದಿಲ್ಲ. ಜೊತೆಗೆ ಈ ಹೊಸ ಹೊಸ ಪದಗಳು ಗೊತ್ತೂ ಆಗುವುದಿಲ್ಲ. "ಇಟ್ಸ್ ಅ ಡಿಸ್‌ಗ್ರೇಸ್ ಟು ಲೈಫ್ ಇಟ್ಸೆಲ್ಫ್" ಎಂದು ಜಾರಿಕೊಂಡ್ರೆ ಮುಗೀತು.
ನಾವು!? ಈ ಲೋರಾ, ಕೆ ಸಾಂಪ್ಲರ್, ಐಪಿ ಅಡಾಪ್ಟರ್, ಚೆಕ್‌ಪಾಯಿಂಟ್, ವಿಎಇ, ಲೇಟೆಂಟ್ ಅನ್ನೋ ಏನೇನೋ ಪದಗಳನ್ನೆಲ್ಲ ನಮ್ಮ ಬದುಕಿನ ಭಾಗವಾಗಿಸಿಕೊಂಡೇ ಇನ್ನು ಬದುಕಬೇಕು. ಆವಾಗ ತಪ್ಪು, ನನಗತ್ಯವಿಲ್ಲ ಎಂದು ಸುಮ್ಮನೆ ಕೂರಲಾಗುವುದಿಲ್ಲ.
ಅಜ್ಜರ ಎಷ್ಟೋ ವರ್ಷಗಳ ಪರಿಶ್ರಮಕ್ಕೆ ಬೆಲೆ ಇಲ್ಲದಂತಾಯ್ತು ಅನ್ನುವ ಮೊದಲು, ಕ್ಯಾಮರಾ ಬಂದಾಗ ರಿಯಲಿಸ್ಟಿಕ್ಕಿನವರಿಗೆ ಹಾಗೆಯೇ ಅನಿಸಿದ್ದು ಸುಳ್ಳಲ್ಲ. ಅಂದು ದುಷಂಪ್, ಪಿಕಾಬಿಯಾ ಎಲ್ಲ ಸ್ತಬ್ಧ ಚಿತ್ರದಲ್ಲೇ ಮೂವ್‌ಮೆಂಟ್ ತೋರಿಸ ಹೊರಟದ್ದರಿಂದಲೇ ಇಂದಿಗೆ ಆ ಯೋಚನೆ ಆನಿಮೇಶನ್ ರೂಪ ತಾಳಿರುವುದು ಎಂಬುದನ್ನು ಮರೆಯುವಂತಿಲ್ಲ! ಮಿಯೋಜಾಕಿ ಅಜ್ಜನ ಪೂರ್ವಜರು ದುಷಂಪನ್ನು ಡಿಸ್‌ಗ್ರೇಸ್ ಎಂದು ಇಂದಿಗೂ ಕೇಳುವ ಹಾಗೆ ಕರೆದಿದ್ದರೆ ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇಂಟರ್ನೆಟ್ ಬಂದಾಗ ಇದ್ದಬದ್ದ ಯಾರ್ಯಾರದ್ದೋ ಇಮೇಜಸ್ ಹುಡುಕಿ, ಪೋಸ್ಟರ್ ಮತ್ತೊಂದು ಮಾಡಿದ್ದನ್ನೂ ತಪ್ಪಿಸಲಾಗಿಲ್ಲ. ಈಗಲೂ ಸಿಕ್ಕಿದ ವಿಡಿಯೋ ಎಲ್ಲ ಸೇರಿಸಿ, ಪೆಪೆರೆಪೆರೇ ಮ್ಯೂಸಿಕ್ಕಿಗೆ ಸಿಂಕ್ ಮಾಡಿ ರೀಲ್ಸ್ ಎಂದು ಹರಿಯಬಿಟ್ಟರೆ ಯಾವಂದೂ ದೂಸ್ರಾ ಮಾತಿರುವುದಿಲ್ಲ. ಇನ್ನು ಮೀಮ್ಸ್ ಕತೆ ಹೇಳಿ ಮುಗಿಯುದಿಲ್ಲ! ಅಷ್ಟೇ ಅಲ್ಲ ಅವೆಲ್ಲ ಇಂದು ಸ್ಪೆಶಲೈಸ್ಡ್ ಸ್ಕಿಲ್ಸ್ ಎಂದು ಲೆಕ್ಕ! ಹಾಗೇ ಈ ಎಐ ಇಮೆಜರಿಯೂ. ಇಂದಿಗೆ ಡಿಸ್‌ಗ್ರೇಸ್ ಎಂದು ಬೊಬ್ಬಿಟ್ಟರೂ ಮುಂದಿನ ವರ್ಷ ಇದೇ ಒಂದು ಸ್ಪೆಶಲೈಸ್ಡ್ ಸ್ಕಿಲ್!
ಕಲೆಯ ಡೆಫಿನಿಶನ್ ಇಂದಿಗೆ ಬದಲಾಗಬೇಕಾದ್ದೂ ಇದಕ್ಕೆಯೇ. ಕ್ರಾಫ್ಟ್ ಆಂಡ್ ಆರ್ಟ್ ಹಾಸ್ ಟು ಬಿ ಡಿಫರೆಂಶಿಯೇಟೆಡ್ ಅಗೈನ್ ಮತ್ತದು ಮುಖ್ಯವಾಗಿ ಪಾಪ್ಯೂಲರ್ ಒಪೀನಿಯನ್ನಾಗಿ ಬದಲಾಗಬೇಕಿದೆ. ಹೇಗೆ ಏನು ಎತ್ತ ಗೊತ್ತಿಲ್ಲ!



