top of page
ಇಂದಿನ ದೇಶಕಾಲವನ್ನು ಅಭಿವ್ಯಕ್ತಿಸಬಲ್ಲ ಹೊಸ ಸ್ವರೂಪವ ಹುಡುಕುತ್ತಾ..

ಉಂದು ದಾದ ಪದ್ಯ!


ree
ree
ree
ree
ree
ree
ree
ree
ree

ಉಂದು ದಾದ ಪದ್ಯ!               25 March 2021


ಓಹ್ ಗಾಡ್!

ಮಾಸ್ತರ ನೋಡಿದ್ದ

ಬೆಂಚಿನ ಮೇಲೆ ಬರೆದಿದ್ದ.

ಐದು ಐದು ಮೂರು

ಐದು ಐದು ಮೂರು

 

ಏನೋ ಇದು ನಂಬರ್!

 

ಸರ್ ಸರ್ ಅದೂ..

"ಬೇಗ ಬೊಗಳೋ"

ನಾಯಿ ಸರ್.

 

ಗೊಳ್ಳೆಂದಿತು ಕ್ಲಾಸ್!

 

ಮಾಸ್ತರು ಬೆತ್ತ ಬಡಿದರು

ಬೆಂಚಿಗೆ ||2 ಬಾರಿ||

ಪುಣ್ಯಕ್ಕೆ ನಾಯಿ ಇನ್ನೂ ಹುಟ್ಟಿರಲಿಲ್ಲ.

ಗೀಟೆಳೆದು ಕಣ್ಣು ಬರೆದರಷ್ಟೇ

ಜೀವ ಬಂದೀತು. ಏಟಾದೀತು.

 

ಬಾಲ ಮುದುರಿ ಓಡಲಿಕ್ಕೂ ಸಾಕು. ಪಾಪ!

 

ನಂಗೆ ನೆನಪಿದೆ ಇನ್ನೂ

ಅಂದು ಮಾಸ್ತರು ಹೇಳಿದ್ದು.

ಕನ್ನಡದ ನಾಯಿಗಿಂತ

ಇಂಗ್ಲಿಷ್‌ದಕ್ಕೆ ಬೆಲೆ ಜಾಸ್ತಿ.

ಉಲ್ಟಾ ಮಾಡಿದರೆ ಮತ್ತೂ.

 

ವ್ಹಾ......

 

ಕೊನೆಯ ಬೆಂಚಿನಲ್ಲಾಗಲೇ

ಥ್ರೀ ಫೈವ್ ಫೈವ್

ಥ್ರೀ ಫೈವ್ ಫೈವ್ ಮೂಡಿತ್ತು.

ಪಾಠವೇನೋ ಅರ್ಥವಾಗಿತ್ತು.

ಬಾಲ ಮಾತ್ರ ಅಲ್ಲಾಡುತ್ತಿತ್ತು.

 


ಓಹ್ ಗಾಡ್!           30 May 2021


ಸರ್ರಕ್ 

ಇವತ್ತು ಪರಿಸರ ದಿನ ಅಲ್ವಾ! ಅದ್ಕೇ ಸ್ವಲ್ಪ ಪರಿಸರ ನೋಡ್ಕೋ ಬರೋಕ್ ಹೋಗಿದ್ದೆ.

 

ಯಾವ ರಗಳೆ ಇರಲ್ಲ. ಮೊಬೈಲ್ ಇಲ್ಲ. ಫೇಸ್ಬುಕ್ ಇಲ್ಲ. ಪುಳ್ಕ್ ಇಲ್ಲ. ಸಮಾಧಾ

ಸರ್ರಕ್!

ನದಿಂದ…

 

ಅಬ್ಬಾ! ಒಂದೇ ಸಲಕ್ಕೆ ಎದೆ ಢವ ಅಂದ್ಬಿಡ್ತು.

 

ಕೂತಿದ್ದೇ ತಡ. ಶುರುಹಚ್ಕೊಂಡ್ವು ಕುಯ್ಯೋದ.

ಗುಂಯ್‌ಯ್‌ಯ್‌್್್‌ಯ್

ಥೂ! ಂಯ್‌ಯ್‌್್‌ಯ್

 

ಕುಂಯ್‌ಯ್ ಕುಂಯ್ಕುಂಯ್ಕಂಯ್ಕುಯ್ ಕುಯ್ ಕುಯ್

ಕುಂಯ್‌ಯ್ ಕುಂಯ್ಕುಂಯ್ಕಂಯ್ಕುಯ್ ಕುಯ್ ಕುಯ್.

ಅಕಾಶದಲ್ಲೆಲ್ಲೋ ರಸಮಂಜರಿ.

 

ಕಿಟ್ರ್‌ಟ್ರ್‌ಟ್ರ್‌ಟ್ರ್…

ಓಹ್! ಇಲ್ಲೂ ಆಗ್ತಿದೆ. ಒಳ್ಳೇದಾಯ್ತು.

 

ಟಪಟರಸರಟಕಟಪಸರಕ್‌ಪರಪಟಕ್

 

ಎಷ್ಟ್ ವಿಚಿತ್ರ ಅಲಾ! ಗಾಳಿ ಶಬ್ದ ಮಾಡದೆ ಬರುತ್ತೆ. ಆದ್ರೆ ಬಂದಾಗ ಉಳ್ದವೆಲ್ಲ ಸೇರಿ ಬಡ್ಕೊಂಡ್ ಶಬ್ದ ಮಾಡುತ್ತೆ.

ಮೈನ್ ಗೆಸ್ಟ್ ಇರ್ಬೇಕು.

ಹಹ್ಹಾ.

ಟಪಟಪರ್‌ಸಕಟಪರಸಟಕ್

ಬಂದ್ರು ಬಂದ್ರು ಬಂದ್ರು.

 

ಟಿಪೀssss...ಟಿಪಿಟಿಪಿಟಿಪಿಟಿಪಿ

ವಾಲಗ ಊದಾಯ್ತು. ಈಗ್ ಶುರು ಮಜಾ.

 

ಗುಂಯ್‌ಯ್್್್‌ಯ್

ಥತ್ತೆರಿಕೆ!

ಕಿರಿಕಿರಿಕಿರಿಕಿರಿಕಿರಿಕಿರಿಕಿರಿ

ನಿಂಗಿಂತ ಗುಂಯ್ಗುಂಯ್‌ದೇ ಕಿರಿಕಿರಿ.

 

ಕ್ಯಾಂವ್ ಕ್ಯಾಂವ್

ಯಾಕಂದ್ರೇ...!

ಆ್ಹ! ಎಷ್ಟ್ ಸೈಲೆಂಟ್ ಆಗೋಯ್ತು.

 

ಟಿಪೀsssss ...ಟಿಪಿಟಿಪಿಟಿಪಿಟಿಪಿಟಿಪಿ

ಹ್ಞಾಂ! ಹೋಡೀರಿ ಹಲ್ಗಿ.

 

ಟಪಟಪಟಪಟಪಟಪಟಪ

ಟೆಕೆ ಟೆಕೆ ಟೆಕೆ ಟಕ್ರೇ...

ಗುಳುಂಕ್ ಗುಳುಂಕ್ ಗುಳುಂಕ್

 

ನುಂಗೇ ಬಿಟ್ಟಲ್ಲಪ್ಪಾ ಎಲ್ಲಾರ್ನೂ!

ಗುಳುಂಕ್!

 

ಚಿರ್ಕ್ ಚಿರ್ಕ್

 

ಗುಂಯ್‌ಯ್್್

ಫಟ್!

ಕಿರಿಕಿರಿಕಿರಿಕಿರಿಕಿರಿ

ಪಿರಿಪಿರಿ ಪೀsssಪ್ಪಿ    ಪಿರಿಪಿರಿಪಿರಿ ಪೀssssಪ್ಪಿ.

 

ಟಪಟಪಟಕರಕಸರಬರ್‌ಪರ್‌‌ಪಟಪಕ್

ಮತ್ತೆ ಬಂದ್ರು ಬಂದ್ರು ಬಂದ್ರು.

 

ಭಡ್! ಭಡಾಲ್!

ಯಪ್ಪಾ! ತಲೆಮೇಲೇ ಬಿದ್ಬಿಟ್ರೆ?

 

ಕ್ಯಾಂವ್ ಕ್ಯಾಂವ್

ಓ! ನಿನ್ ಪ್ರಶ್ನೆಗೆ ಉತ್ರ ಹೇಳಿಲ್ಲ ಅಲಾ! ಅದೂ…

ಸರಕ್!

ಯೋ! ಯಾಕೋ ಹೆದ್ರಿಸ್ತೀರಾ?!

 

ಕೆರ್ಕ್ ಕೆರ್ಕ್ ಕೆರ್ಕ್ ಕೆರ್ಕ್

ನಮ್ಮನ್ ಸೊಳ್ಳೆ!

 

ಚಿಚ್ಚೀಂವ್ ಚಿಚ್ಚೀಂವ್

ಚಿಚ್ಚೀಂವ್ ಚಿಚ್ಚೀಂವ್

 

ಸರಿಸರಿ ಬುಡಪ್ಪಾ. ಇನ್ಮುಂದೆ ಹೇಳಲ್ಲ ಹಂಗೆಲ್ಲಾ.

ಟ್ರೀಂಕ್ ಟ್ರೀಂಕ್

ಒಪ್ಕೊಂಡ್ನಲ್ವಾ! ಇನ್ಯಾಕ್ ಪ್ಲೀಸ್ ಎಲ್ಲಾ!

 

ಟಪಟಕರಸರಟ್‌ಪರಶಕಲಕಪಟಕ್

ಓಹ್! ನಮ್ಗೇನಾ ಚಪ್ಪಾಳೆ! ಇರ್ಲಿ ಇರ್ಲಿ.

 

ಕುರುಕುರುಕುರುಕುರುಕುರು

ಕ್ಯಾಂವ್ ಕ್ಯಾಂವ್ ಕ್ಯಾಂವ್

ಅದೇ ಕಣಪ್ಪಾ. ಕೆರ್ಕೊಂಡ್ ಇರ್ಬೇಕಾಗುತ್ತೆ.

 

ಕೆರ್ಕ್ ಕೆರ್ಕ್ ಕೆರ್ಕ್ ಕೆರ್ಕ್

ಥೋ!

ಗುಂಯ್‌ಯ್‌ಯ್

ಫಟ್!

ಭಡ್! ಭಡಾಲ್!

ಹೊಡೀಲೂ ಬಾರ್ದಾ!

 

ಪಿಳೀ...

ಗುಟುಗುಟುಗುಟುಗುಟುಗುಟುಗುಟು

ಕಿಟ್ ಕಿಟ್ ಕಿಟ್ ಕಿಟ್ಕಿಟ್

ಕಾ ಕಾ ಕಾ

ಪರವಾಗಿಲ್ಲ ಕಣೋ ನೀನೂವೆ.

ಕಾಕಾ ಕಾ

ನಿಂಗೂ ಹಾಡೋಕ್ ಬರುತ್ತೆ.

ಕಾ ಕಾ ಕಾ ಕಾ

ನಿಂಗೂ ಬರುತ್ತೆ ಕಣ.

ಕಾ!

ನಿಂಗೂನಪ್ಪ.

ಕಾ ಕಾ ಕಾ ಕಾ ಕಾ     ಕಾಕಾಕಾಕಾ

ಈಗ ಸೂಪರ್. ಎಲ್ಲಾ ಒಟ್ಟಿಗೆ ಸೇರಿ ಹಾಡ್ದಾಗ!

 

ಪಿಳೀ...

ಕಿಟ್ರೀssss

ಕ್ಯಾಂ

ಆ್ಯಂವ್ ಕ್ಯಾಂವ್

ಜುಗಲ್‌ಬಂದಿ ಬೇರೆನಾ!

 

ಕಾ ಕಾ ಕಾ

ಹೇಳಿದ್ನಲ್ಲಾ…ಚೆನ್ನಾಗಿದೆ ಅಂತ.

ಕಾಕಾ ಕಾ ಕಾ ಕಾ ಕಾ

ಅಯ್ಯೋ! ನಿಜವಾಗ್ಲೂ ಕಣ್ರೋ.

ಕೆರ್ಕ್ ಕೆರ್ಕ್ ಕೆರ್ಕ್ ಕೆರ್ಕ್

 

ಪ್ರ್ಯಾಂ ಪ್ರ್ಯಾಂ ಕುಂಯ್ ಕುಂಯ್ ಪ್ರಿ ಪ್ರಿ

ಪ್ರ್ಯಾಂ ಪ್ರ್ಯಾಂ ಕುಂಯ್ ಕುಂಯ್ ಪ್ರಿ ಪ್ರಿ

ವ್ಹಾ!

ಕ್ರೀsssಂ ಕಿಟಿಕಿಟಿಕಿಟಿ

ಚಿಚ್ಚೀಂವ್ ಚಿಚ್ಚೀಂವ್

ನೀವೂ ಚೆನ್ನಾಗೇ ಹೇಳ್ತಿದ್ದೀರ ಕಣ್ರೋ. ನಾನೊಬ್ಬ!

ಲೋ ಗಾಳಿ! ಚಪ್ಪಾಳೆ ಹೊಡ್ಸೋ.

 

ಪಟಪಟಸರಟಕಫಟೀಸ್

ಸುರ್ರ್‌ರ್ರ್‌್ರ್‌್ರ್‌

ಏ!

ಕುಂಯ್ಕುಂಯ್ಕುಂಯ್ ಕುಯ್ ಕುಯ್

ಕುಂಯ್ಕುಂಯ್ಕುಂಯ್ ಕುಯ್ ಕುಯ್

 

ಹಂಗಲ್ಲಪ್ಪಾ. ಸ್ವಲ್ಪ ತಾಳಕ್ಕೆ ಸರಿ ಇರ್ಲಿ. ಕೆರ್ಕ್ ಕೆರ್ಕ್.

ಎಲ್ಲಾರ್ ಜೊತೆಗೆ ಹೊಂದಾಣಿಕೆ ಆಗ್ಬೇಕು.

ಗುಂಯ್‌ಯ್‌ಯ್

ಟಿಕಿಟಿಕಿಟಿಕಿಟಿಕಿಟಿಕಿ

ಕ್ರೀssssss

ಕೇಳ್ರೋ ಸ್ವಲ್ಪ ಹೇಳಿದ್ನ.

ಸರ್ರಕ್!

ಸರಿ ಅಣ್ಣಾ. ನಾನೇ ಕೇಳ್ತೀನಿ ನೀವ್ ಹೇಳಿದ್ನ.

 

ಕಿಟ್ ಕಿಟ್ ಕಿಟ್ ಕಿಟ್ಕಿಟ್ಕಿಟ್

ನಗ್ಬೇಡಾ…

ಸ್…

ಗೊತ್ತಾಯ್ತು ಗೊತ್ತಾಯ್ತು. ಫಟ್!

ಕೆರ್ಕ್ ಕೆರ್ಕ್ ಕೆರ್ಕ್

 

ಕ್ಯಾಂವ್! ಟಿಕಿಟಿಕಿಟಿಕಿಟಿಕಿಟಿಕಿ

ಕ್ರ್ಯಾಂವ್ ಕ್ರ್ಯಾಂವ್!

ಕಾ ಕಾ ಕಾಕಾ ಕಾ

ಗುಂಯ್‌ಯ್‌್್‌ಯ್

ಫಟ್!

ಭಡ್! ಭಡಾಲ್!

ಚಿಚ್ಚೀಂವ್ ಚಿಚ್ಚೀಂವ್

ಕ್ರೀssssssಕಿಟ್ಕಿಟಿಕಿಟಿಕಿಟಿ

 

ಅಯ್ಯಯ್ಯೋ! ಸಮಾಧಾನ ಸಮಾಧಾನ ಮಾಡ್ಕೊಳ್ರೋ.

ತೆಗೊಳ್ಳಿ ನನ್ ಕಡೆಯಿಂದ ಒಂದ್ ಪುಳ್ಕ್.


 

ಸರ್ರಕ್                     5 June 2020


ಗೊರ್ಗೊರ್ಗೊರ್ಕೆ 

ಕಣ್ಣುಮುಚ್ಚಿ ಮಲಗಿದ್ದೆ ನಾ.

 

ಟಿಕ್ ಟಕ್ ಟಿಕ್ ಟಕ್ ಟಿಕ್ ಟಕ್

ಗುಸುಗುಸುಗುಸುಗುಸು

ಗುರ್್ರ್್ರ್್ರ್್ರ್್ರ್್ರ್

ಪುಳ್ಕ್

 

ಅರ್ರೇ ಇದ್ಯಾವುದು?

ಫ್ಯಾನ್ ಗುಸುಗುಟ್ಟುತ್ತಿದೆ. ಫ್ರಿಡ್ಜ್ ಗುರುಗುಟ್ಟುತ್ತಿದೆ.

ಗಡಿಯಾರ ಲೆಫ್ಟ್ ರೈಟ್ ಮಾಡ್ತಾ ಮನೆ ಕಾಯ್ತಿದೆ.

ಈ ಪುಳ್ಕ್ ಯಾವುದು?

 

ಗಾಳಿಗೆ ಮನೆಯ ಬಾಗಿಲು ಚಿಟಿರ್್ರ್್ರ್ ಅಂತು.

 

ಅದೇನ್ ಮನೆಕಾಯ್ತಿದೆಯೋ ಈ ಗಡಿಯಾರ! ಗಾಳಿಗ್ ಬರೋಕ್ ಬಿಟ್ಟಿದ್ ಯಾರು!

ಟಿಕ್ ಟಕ್ ಟಿಕ್ ಟಕ್ ಟಿಕ್ ಟಕ್

ಸರಿ ಕಣಪ್ಪಾ

ಪುಳ್ಕ್

ಗುಸುಗುಸುಗುಸುಗುಸು

ಥೂ!! ಈ ಪುಳ್ಕ್ ಎಲ್ಲಿಂದಪ್ಪಾ!

ಪುಳಕ್ಕ್

 

ಆss!

 

ಯಾವುದೋ ಒಂದು ಪದ್ಯ ಶುರುವಾಯ್ತು.

 

ಓಹ್! ಇದು ನಮ್ಮ ಜುಕರ್ ಬರ್ಗ್‌ದು.

ಪುಳ್ಕ್

ಸರಿ ಹೋಯ್ತು.

 

ಟಿಂಗ್

ಏನಪ್ಪಾ ನಿಂದು?

ದೂರದಲ್ಲೆಲ್ಲೋ ಕಾಕಾಕಾ ಎನ್ನುತ್ತಾ ಕಾಗೆ ಹಾರಿತ್ತು.

 

ಹಹ್ಹಹ್ಹಹ್ಹಾ

ಟಿಂಗ್

ಏ!

ಟಿಂಗ್

ಟಿನ್

ಪುಳ್ಕ್ ಪುಳ್ಕ್

ಪುಳಕ್

ಗುಸುಗುಸುಗುಸುಗುಸು

ಟಿಕ್ ಟಕ್ ಟಿಕ್ ಟಕ್ ಟಿಕ್ ಟಕ್

ಪುಳ್ಕ್

 

ಏ..ಥೋ! ಏನೋ ಬಾಧೆ! ಮಲಗಬೇಕೂಂತ ತಾನೆ ಬಿದ್ದಿರೋದಿಲ್ಲಿ!

ಪುಳ್ಕ್

ಚಿಟಿರ್್ರ್್ರ್

 

ಲೋ ಗಡಿಯಾರ. ಸರಿಯಾಗಿ ಕಾಯೋ ಮಾರಾಯ.

ಟಿಕ್ ಟಕ್ ಟಿಕ್

ಹ್ಞಾಂ! ಗೊತ್ತುಗೊತ್ತು. ಟಿಕ್ ಟಕ್ ಟಿಕ್ ಟಕ್ ನಿಂದು.

ಗುರ್್ರ್್ರ್್ರ್

ಕಿಟ್ರೀsss ಕಿಟ್ರ್‌ಕಿಟ್ರ್‌ಕಿಟ್ರ್ ಕಿಟ್ರೀssss

 

ಅಬ್ಬಾ! ಇವೇ ಪರವಾಗಿಲ್ಲಪ್ಪ. ಈ ಪುಳ್ಕ್ ಸುಳ್ಕ್‌ಗಿಂತ.

 

ಠಪ್!

ಗುಂಯ್‌ಯ್್್್‌ಯ್

ಫಟ್!

 

ಟಕಟಕಟಕಟಕ್ರ್್ರ್

ಪುಳ್ಕ್

ಹ್ಞಾಂ! ಕುರ್ಚಿ.

 

ಸುಯ್‌ಸುಂಯ್‌ಶುಂಯ್

 

ಇವ್ರದ್ದೊಳ್ಳೆ ಮಜಾ. ಒಂದು ಸುಯ್ ಅನ್ನುತ್ತೆ. ಇನ್ನೊಂದು ಕಿಟ್‌ಕಿಟ್‌ಕಿಟ್ರೀ ಅನ್ನುತ್ತೆ.

 

ಕಿಟ್‌ಕಿಟ್‌ಕಿಟ್ಕಿಟಿಕಿಟಿಕಿಟಿಕಿಟಿ

ಟಿಕ್ ಟಕ್ ಟಿಕ್ ಟಕ್

 

ಗೊತ್ತಪ್ಪಾ. ನೀ ಚೆನ್ನಾಗ್ ಕಾಯ್ತಿದ್ದೀಯ. ಆಗಾಗ ತೋರಿಸ್ಕೋಬೇಡ.

 

ಟಿನ್

ಪುಳ್ಕ್

ಟಿನ್ ಟಿಂಗ್

 

ಅಯ್ಯೋ! ಮುಗಿಲಿಲ್ವಾ ಇನ್ನೂ!

ಪುಳ್ಕ್.

 

 

 

ಗೊರ್ಗೊರ್ಗೊರ್ಕೆ                     30 May 2020

ree

ಹತ್ತುಪದ

ಮೂರು ದಿನ

ಹಾಳು ನಿದ್ದೆ

ನಾಲ್ಕು ಚೂರು

ಜಾರಿ ಬಿದ್ದು

ಕೊಂಡ ಮೊಬೈಲು‌.

 

ಮೂರು ದಿನ ಹಾಳು

ನಿದ್ದೆ ನಾಲ್ಕು ಚೂರು

ಜಾರಿ ಬಿದ್ದು

ಕೊಂಡ ಮೊಬೈಲು.

 

ಮೂರು ದಿನ ಹಾಳು ನಿದ್ದೆ

ನಾಲ್ಕು ಚೂರು ಜಾರಿ ಬಿದ್ದು

ಕೊಂಡ ಮೊಬೈಲು.

 

ಮೂರು ದಿನ, ಹಾಳು ನಿದ್ದೆ ನಾಲ್ಕು,

ಚೂರು ಜಾರಿ ಬಿದ್ದು

ಕೊಂಡ ಮೊಬೈಲು.

 

ಮೂರು ದಿನ

ಹಾಳು ನಿದ್ದೆ ನಾಲ್ಕು

ಚೂರು ಜಾರಿ

ಬಿದ್ದುಕೊಂಡ ಮೊಬೈಲು.

 

ಮೂರು ದಿನ ಹಾಳು ನಿದ್ದೆ

ನಾಲ್ಕು ಚೂರು

ಜಾರಿ ಬಿದ್ದುಕೊಂಡ ಮೊಬೈಲು.

 

ಮೂರು ದಿನ, ಹಾಳು ನಿದ್ದೆ ನಾಲ್ಕು,

ಚೂರು ಜಾರಿ ಬಿದ್ದು ಕೊಂಡ ಮೊಬೈಲು.

 

ಮೂರು ದಿನ ಹಾಳು

ನಿದ್ದೆ ನಾಲ್ಕು ಚೂರು

ಜಾರಿ ಬಿದ್ದುಕೊಂಡ

ಮೊಬೈಲು.

 

ಮೂರು ದಿನ ಹಾಳು ನಿದ್ದೆ

ನಾಲ್ಕು ಚೂರು ಜಾರಿ ಬಿದ್ದುಕೊಂಡ

ಮೊಬೈಲು.

 

ಮೂರು ದಿನ

ಹಾಳು ನಿದ್ದೆ

ನಾಲ್ಕು ಚೂರು ಜಾರಿ

ಬಿದ್ದುಕೊಂಡ ಮೊಬೈಲು.

 

ಮೂರು ದಿನ ಹಾಳು ನಿದ್ದೆ ನಾಲ್ಕು

ಚೂರು ಜಾರಿ ಬಿದ್ದು

ಕೊಂಡ ಮೊಬೈಲು.

 

ಮೂರು ದಿನ ಹಾಳು

ನಿದ್ದೆ ನಾಲ್ಕು ಚೂರು

ಜಾರಿ ಬಿದ್ದು ಕೊಂಡ ಮೊಬೈಲು.

 

ಮೂರು ದಿನ ಹಾಳು-ನಿದ್ದೆ

ನಾಲ್ಕು ಚೂರು-ಜಾರಿ ಬಿದ್ದು

-ಕೊಂಡ ಮೊಬೈಲು.

 

 

ಹತ್ತುಪದ                   03 ಏಪ್ರಿಲ್ 2022


ಸಾವಿರಸಾಲು


ree

ಸಾವಿರಸಾಲು                     15 July 2020

ಮುನ್ನುಡಿ

ನಾನೊಬ್ಬ ಕವಿಯಲ್ಲ.

ವಿದ್ಯಾರ್ಥಿ.

ದೃಶ್ಯಕಲಾ ವಿದ್ಯಾರ್ಥಿ

ಮೈಸೂರ ಕಾವಾದಲ್ಲಿ.

 

ಕಾವ್ಯಗಳನ್ನು ಓದಿಕೊಂಡಿಲ್ಲ.

ಬರೆದದ್ದೂ ಕಾವ್ಯವಾಗಿರಲಿಕ್ಕಿಲ್ಲ.

ಪರವಾಗಿಲ್ಲ.

ಏನೋ ಒಂದು ಮಾಡಿ

ಕೈಗೆ ಸಿಕ್ಕಷ್ಟು ಬಾಚಿಕೊಂಡಿದ್ದೇನಲ್ಲ.

 

ಕಣ್ಣುಕಿವಿಗೆ ಬಿದ್ದದ್ದು, ಬುದ್ಧಿಗೆ ದಕ್ಕಿದ್ದು

ತುಂಡುಸಾಲಲ್ಲಿ ಬರೆದು ನೇತುಹಾಕಿದ್ದು

ಬಿಸಿಲಿದ್ದಾಗ ಒಣಗಲಿ,

ಮೋಡ ಕವಿದರೆ ತೆಗೆಯಿರಿ,

ಮರೆಯದಿರಿ, ನಿಮ್ಮ ಜವಾಬ್ದಾರಿ.

 

ಪದಗಳ ಗರಗಸಕ್ಕೆ

ಲಯವೆಂಬ ಅರ ನನ್ನಲ್ಲಿಲ್ಲ.

ತೊಂದರೆಯಿಲ್ಲ.

ಕೆಂಪು ಇಲ್ಲದಿದ್ದರೆ

ನೀಲಿ ಬಳಸುತ್ತೇನೆಂದು

ಪಿಕಾಸೋನೇ ಹೇಳಿದ್ದಾನಂತಲ್ಲ.

 

ಬರಡು ಪದಗಳ ರಾಶಿ, ವ್ಯಾಕರಣದ ಸಿಮೆಂಟು

ಮರೆಯದ ಅನುಭವದ ಮರಳು,

ಅದರಲ್ಲೊಂದು ಮಕ್ಕಳಾಡಿದ ಮಾಟೆ,

ಪುಡಿ ಪುಡಿ ಭಾವದ ಹರಳುಕಲ್ಲು,

ಅಲ್ಲಲ್ಲಿ ಕದ್ದು ಸೇದಿದ ಸಿಗರೇಟು ಬಡ್,

ಒಂದು ನಾಲ್ಕರ ಅನುಪಾತಕ್ಕೆ ಬುದ್ಧಿ, ಮನಸ್ಸು.

ನೀರು ಸುರಿದಂತೆ ಒಟ್ಟಾದ ಜೋಡಣೆಯೇ

ನನ್ನ ಮೇಕಪ್ ಕಿಟ್.

 

ಕನ್ನಡಿ ಮುಂದೆ ಕೂತು ಡಬ್ಬಿ ಮುಚ್ಚಳ ತೆಗದರೆ

ಪೌಡರಿಲ್ಲ. ಸುಗಂಧಗಳಿಲ್ಲ. ಚಿಂತನೆಗೆ ಕೊರತೆಯಿಲ್ಲ.

ಇಲ್ಲದರ ಹುಡುಕದೆ, ಇರುವುದ ಕಂಡರೆ

ಸಹಜವೇ ಸುಂದರ, ಎಲ್ಲವೂ

ಪ್ರಯತ್ನ ಪಟ್ಟರೆ ಮಾತ್ರ.



ಮುನ್ನುಡಿ               12 ಮೇ 2022



ree

ತಲೆಗೂ ಬುಡಕ್ಕೂ

ಈ ವಾದ ವಿವಾದದ ಸಮಯದಲ್ಲಿ ಪ್ರತಿಯೊಬ್ಬರದ್ದೂ ಒಂದೊಂದು ತರ್ಕ. ಆಕಡೆದೊಂದು ಈಕಡೆದೊಂದು ಇದ್ದದ್ದೇ.

ಕಷ್ಟಪಟ್ಟೋ ಅಥವಾ ಅಗತ್ಯವೆಂದೋ ಎರಡನ್ನೂ ಸಮೀಕರಣ ಮಾಡುವ ಪ್ರಯತ್ನದ್ದೊಂದು ಅಥವಾ ಎರಡನ್ನೂ ದೂಷೀಕರಣ ಮಾಡುವಂತದ್ದು ಇನ್ನೊಂದು.

ಅಷ್ಟೇ, ಯಾವುದೇ ವಿಷಯ ಆದರೂ.

 

ಪಕ್ಷಿಯಾಗಿ ಹಾರುತ್ತಾ ಎಲ್ಲವ ನೋಡಿದರೆ...ಇಷ್ಟಪಟ್ಟು ಮತ್ತೊಂದು ಸಮೀಕರಣವನ್ನೋ ದೂಷೀಕರಣವನ್ನೋ ಮಾಡಬಹುದೆಂದು ತೋರುತ್ತದೆ.

 

ಭಗವದ್ಗೀತೆಯಲ್ಲಿ ಕೃಷ್ಣ, 'ಒಳ್ಳೆಯದು ಯಾವಾಗಲೂ ಸರಿಯೇ ಆಗಿರುತ್ತದೆ, ಸರಿಯಾದ ಜಾಗ/ಸಮಯದಲ್ಲಿ ಮಾಡಿದ ತಪ್ಪು ಕೆಲಸವೂ ಸರಿಯೇ ಆಗಬಹುದು, ಕೆಲವು ಸಂದರ್ಭಗಳಲ್ಲಿ ತಪ್ಪು ಒಳ್ಳೆಯದರಿಂದಲೇ ಸಂಭವಿಸಬಹುದೆಂದೂ ಮತ್ತು ತಪ್ಪು ಮಾಡುವುದು ಎಂದಿಗೂ ಸರಿಯಲ್ಲ' ಎನ್ನುವ ಹಾಗೆಯೇ ಇದೂ.

 

ಈಗಿಲ್ಲಿ ಭಗವದ್ಗೀತೆ ಬಂದುದು ವಿವಾದವಾಯಿತೇನೋ!

 

ಇರಲಿ, ಅಧ್ಯಾತ್ಮದ ಬೊಗಳೆ ಬೇಡ ಎನ್ನುವ ತಾರ್ಕಿಕ ವೈಜ್ಞಾನಿಕ ಆಧುನಿಕ ಸಾಮಾಜಿಕ ಮುಂತಾದ ವಿಶೇಷಣಗಳ ಪ್ರತಿನಿಧಿಸುವವರಿಗೂ ಒಂದು ಉದಾಹರಣೆ ಇರಲಿ.

ಲಾಜಿಕ್ ಗೇಟ್ಗಳಲ್ಲಿ...

 

1    1    ->  0

0    0    ->  1

1    0    ->  1

0    1    ->  1

 

ಪಕ್ಕದ ಮನೆಯ ಗೇಟಿನ ಒಳಗೂ ಇಂತದ್ದೇ ಒಂದು ನಾಯಿ ಇರುತ್ತದೆ. ಬೊಗಳುತ್ತದೋ ಕಚ್ಚುತ್ತದೋ ಏನೂ ಮಾಡುವುದಿಲ್ಲವೋ ಅಥವಾ ಎರಡನ್ನೂ..!

ಇಂಜೆಕ್ಷನ್ ಹೊಕ್ಕರೆ ತಿಳಿಯುತ್ತದೆ.

 

ಸಮಯಕ್ಕೆ ಸರಿಯಾಗಿ ಇಂಜೆಕ್ಷನ್ ತೆಗೆದುಕೊಳ್ಲಿಲ್ಲ ಅಂತಾದ್ರೆ ಹೀಗೆಯೇ. ಏನೋ ಹೇಳಹೊರಟು ಇನ್ನೇನೋ ಹೇಳಬೇಕಾಗುತ್ತದೆ.

ತಲೆಯಿಲ್ಲ ಬುಡವಿಲ್ಲ ಅಥವಾ

ಬುಡವಿದೆ ತಲೆಯಿಲ್ಲ ಅಥವಾ

ತಲೆಯಿದ್ದೂ ಬುಡವಿಲ್ಲ ಅಥವಾ

# ತಲೆ # ಬುಡ

 

ಸಮೀಕರಣ ಮಾಡುವುದು ಕಷ್ಟ. ತರಹೇವಾರು ದೃಷ್ಟಿಕೋನಗಳ ತಿಳಿಯುವುದಕ್ಕೇ ಆಸಕ್ತಿ ಬೇಕು, ಶ್ರಮ ಹಾಕಬೇಕು. ಆಸಕ್ತಿ ಬರಲು ಅನುಭವಿಸಲು ಕಲಿಯಬೇಕು. ದೃಷ್ಟಿಕೋನಗಳ ಅನುಭವಿಸಲು ವಿಷಯದ ಮೋರೆ ನೋಡದೆ, ವಾದ ಕಟ್ಟಿದ ಪರಿಯ ಗಮನಿಸಬೇಕು.

 

ಇದಿನ್ನು ಮುಂದುವರಿಯಬಹುದು

ಮುಂದುವರಿಯದೆಯೂ ಇರಬಹುದು

ಅಥವಾ…

ಇಲ್ಲಿಗೇ ಮುಗಿದಿರಬಹುದು, ಹೇಗಿದ್ದರೂ

ಇದೀಗ ನಿಮ್ಮ ಕೈಯಲ್ಲಿಹುದು.

 


ತಲೆಗೂ ಬುಡಕ್ಕೂ                  4 April 2022

ಹೇಳಿಕೆ 

ಗಾಳಿ ದೂರದ್ದು

ಜೋರು ಸದ್ದು

ಬಡಿತ ಹೃದಯದ್ದು.

 

ಬಂತು ಹತ್ತಿರ

ಕೇಳದೆ ಎತ್ತರ

ಮಳೆಯ ಜೊತೆಗೆ

ದಡಬಡನೆ‌.

 

ಭುಸಕ್ಕನೆ ಬಿತ್ತು

ಮನೆಯ ಒಳಗೆ

ಡಬಡಬ ಕಿಟಕಿ

ಯ ಹೊರಗೆ ಇಣುಕಿ

ಕುಳಿತು ಕುಂಡೆ ಜಾರಿಸಿ

ಮನಸ್ಸು ಕೇಳಿತು

ಬೇಕಾ ಬಾಯಾರಿಕೆ?

 

ಅರ್ಧ ಲೋಟ ಬಿಸಿ ಚಾಯ

ಕರುಕುರು ತಿಂಡಿ ಸಲೂಪ

ಚಳಿಗೆ ರುಚಿ ಜಾಸ್ತಿ ಹಹ್ಹಾ.

 

ನಾಡಿದ್ದು ತಿಥಿಯೂಟ