top of page
ಮಳೆನೀರು ನಿಂತಿದ್ದ
ಬಿಸಿಲಿದ್ದ ಅಂಗಳದಿ
ಸಾಗಿತೇ ಗೆರೆ ಸದ್ದಿಲ್ಲದೇ?
-------(silence)-------
ಬಿಸಿಲನೋಡಿಸಿ
ಕಬಳಿಸಿದ ರಾಜ್ಯದಲಿ
ಧ್ವಜನೆಟ್ಟ ಕರಿಮೋಡ
ಕ್ಕೂ ನೆರಳಿಹುದೇ?
ಬದಲಾದ ಬಣ್ಣವ
ಕಾಣುತ್ತಲೆ ಕುಗ್ಗಿದ
ನೆಲದ ನೆತ್ತಿಗೆ
ಮತ್ತೆ ಮುತ್ತಿಗೆ
ಬಿಸಿಲೇ? ಮಳೆಯೇ?
ಊಹೆಗೆ… 11 Aug 2020
bottom of page