top of page
ಕವಿತೆಲಿ ಕಾವ್ಯಾತ್ಮಕ
ಹೋಲಿಕೆಗಳಿರಬೇಕು.
ಜೇಡ ಹೆಣೆದ ಬಲೆಯಲಿ
ಸಿಕ್ಕ ರೂಪಕಗಳ
ನಿಧಾನಕೆ ಸಾಗಿ ಹಿಡಿದು ತಿನ್ನಬೇಕು.
ಜೇಡತತ್ವ ಪಥದ ಪಾಠ
ಅಂದು ನಮಗೆ.
ನಮ್ಮ ಭೂಮಿ ಗೋಳವಲ್ಲ.
ಹುಚ್ಚು ಹೆದರಿಕೆ ಬೇಡ.
ತಿರುಗಿ ತಿರುಗಿ
ಮತ್ತೆ ಅಲ್ಲಿಗೇ ಬರಲು
ನಮ್ಮ ಭೂಮಿ ಗೋಳವಲ್ಲ.
ಗುರುಗಳ ಮಾತು ಸುಳ್ಳಾಗುವುದಿಲ್ಲ.
ಒಂದು ಮೂಲೆಯಿಂದ
ಗೊತ್ತುಗುರಿಯಿಲ್ಲದೆ
ನೇರ ನಡೆದರೆ ಸಿಗುತ್ತದೆ
ಇನ್ನೊಂದು ಮೂಲೆ.
ಹೆಣೆದ ದಾರಿಯ
ಅಡೆತಡೆಗಳೆಲ್ಲ
ಸೀದ ಹೊಟ್ಟೆಗೆ.
ಇಡು ದಾಪುಗಾಲು
ಇವೆ ಎಂಟು ಕಾಲು!
ಉದ್ದದ ಬಾರಿಗಿರಲಿ
ಉಳಿದ ಎರಡು ಬೆರಳು.
ಟೈಪಿಂಗ್… 28 ಜುಲೈ 2021
bottom of page
