top of page

ಈ ವಾದ ವಿವಾದದ ಸಮಯದಲ್ಲಿ ಪ್ರತಿಯೊಬ್ಬರದ್ದೂ ಒಂದೊಂದು ತರ್ಕ. ಆಕಡೆದೊಂದು ಈಕಡೆದೊಂದು ಇದ್ದದ್ದೇ.

ಕಷ್ಟಪಟ್ಟೋ ಅಥವಾ ಅಗತ್ಯವೆಂದೋ ಎರಡನ್ನೂ ಸಮೀಕರಣ ಮಾಡುವ ಪ್ರಯತ್ನದ್ದೊಂದು ಅಥವಾ ಎರಡನ್ನೂ ದೂಷೀಕರಣ ಮಾಡುವಂತದ್ದು ಇನ್ನೊಂದು.

ಅಷ್ಟೇ, ಯಾವುದೇ ವಿಷಯ ಆದರೂ.

 

ಪಕ್ಷಿಯಾಗಿ ಹಾರುತ್ತಾ ಎಲ್ಲವ ನೋಡಿದರೆ...ಇಷ್ಟಪಟ್ಟು ಮತ್ತೊಂದು ಸಮೀಕರಣವನ್ನೋ ದೂಷೀಕರಣವನ್ನೋ ಮಾಡಬಹುದೆಂದು ತೋರುತ್ತದೆ.

 

ಭಗವದ್ಗೀತೆಯಲ್ಲಿ ಕೃಷ್ಣ, 'ಒಳ್ಳೆಯದು ಯಾವಾಗಲೂ ಸರಿಯೇ ಆಗಿರುತ್ತದೆ, ಸರಿಯಾದ ಜಾಗ/ಸಮಯದಲ್ಲಿ ಮಾಡಿದ ತಪ್ಪು ಕೆಲಸವೂ ಸರಿಯೇ ಆಗಬಹುದು, ಕೆಲವು ಸಂದರ್ಭಗಳಲ್ಲಿ ತಪ್ಪು ಒಳ್ಳೆಯದರಿಂದಲೇ ಸಂಭವಿಸಬಹುದೆಂದೂ ಮತ್ತು ತಪ್ಪು ಮಾಡುವುದು ಎಂದಿಗೂ ಸರಿಯಲ್ಲ' ಎನ್ನುವ ಹಾಗೆಯೇ ಇದೂ.

 

ಈಗಿಲ್ಲಿ ಭಗವದ್ಗೀತೆ ಬಂದುದು ವಿವಾದವಾಯಿತೇನೋ!

 

ಇರಲಿ, ಅಧ್ಯಾತ್ಮದ ಬೊಗಳೆ ಬೇಡ ಎನ್ನುವ ತಾರ್ಕಿಕ ವೈಜ್ಞಾನಿಕ ಆಧುನಿಕ ಸಾಮಾಜಿಕ ಮುಂತಾದ ವಿಶೇಷಣಗಳ ಪ್ರತಿನಿಧಿಸುವವರಿಗೂ ಒಂದು ಉದಾಹರಣೆ ಇರಲಿ.

ಲಾಜಿಕ್ ಗೇಟ್ಗಳಲ್ಲಿ...

 

1    1    ->  0

0    0    ->  1

1    0    ->  1

0    1    ->  1

 

ಪಕ್ಕದ ಮನೆಯ ಗೇಟಿನ ಒಳಗೂ ಇಂತದ್ದೇ ಒಂದು ನಾಯಿ ಇರುತ್ತದೆ. ಬೊಗಳುತ್ತದೋ ಕಚ್ಚುತ್ತದೋ ಏನೂ ಮಾಡುವುದಿಲ್ಲವೋ ಅಥವಾ ಎರಡನ್ನೂ..!

ಇಂಜೆಕ್ಷನ್ ಹೊಕ್ಕರೆ ತಿಳಿಯುತ್ತದೆ.

 

ಸಮಯಕ್ಕೆ ಸರಿಯಾಗಿ ಇಂಜೆಕ್ಷನ್ ತೆಗೆದುಕೊಳ್ಲಿಲ್ಲ ಅಂತಾದ್ರೆ ಹೀಗೆಯೇ. ಏನೋ ಹೇಳಹೊರಟು ಇನ್ನೇನೋ ಹೇಳಬೇಕಾಗುತ್ತದೆ.

ತಲೆಯಿಲ್ಲ ಬುಡವಿಲ್ಲ ಅಥವಾ

ಬುಡವಿದೆ ತಲೆಯಿಲ್ಲ ಅಥವಾ

ತಲೆಯಿದ್ದೂ ಬುಡವಿಲ್ಲ ಅಥವಾ

# ತಲೆ # ಬುಡ

 

ಸಮೀಕರಣ ಮಾಡುವುದು ಕಷ್ಟ. ತರಹೇವಾರು ದೃಷ್ಟಿಕೋನಗಳ ತಿಳಿಯುವುದಕ್ಕೇ ಆಸಕ್ತಿ ಬೇಕು, ಶ್ರಮ ಹಾಕಬೇಕು. ಆಸಕ್ತಿ ಬರಲು ಅನುಭವಿಸಲು ಕಲಿಯಬೇಕು. ದೃಷ್ಟಿಕೋನಗಳ ಅನುಭವಿಸಲು ವಿಷಯದ ಮೋರೆ ನೋಡದೆ, ವಾದ ಕಟ್ಟಿದ ಪರಿಯ ಗಮನಿಸಬೇಕು.

 

ಇದಿನ್ನು ಮುಂದುವರಿಯಬಹುದು

ಮುಂದುವರಿಯದೆಯೂ ಇರಬಹುದು

ಅಥವಾ…

ಇಲ್ಲಿಗೇ ಮುಗಿದಿರಬಹುದು, ಹೇಗಿದ್ದರೂ

ಇದೀಗ ನಿಮ್ಮ ಕೈಯಲ್ಲಿಹುದು.

 


ತಲೆಗೂ ಬುಡಕ್ಕೂ                  4 April 2022

bottom of page