top of page

ದುಡ್ಡು ಸಾಕಾದೀತು, ಹೆಚ್ಚು ಬೇಡ

ಪಯಣದಲಿ ಖುಷಿ ಮುಖ್ಯ.

ಹೋಗಿ ಬರುತ್ತೇನೆ.

ಬೈ ಬೈ.

 

ನಮಸ್ಕಾರ,

ನಾನು ಸುಶ್ರುತ.

ಗೊತ್ತಲ್ಲ?

 

ಶ್ರುತ ಎಂದರೆ ಕೇಳುವವನು ಎಂದರ್ಥ.

ಗೊತ್ತಿಲ್ಲವಾದರೆ ಹೇಳಿದ್ದು.

ಹೆಸರಿಗೆ ತಕ್ಕಂತೆ ನಾನೂ.

ಅನುಷ್ಠಾನಕ್ಕೆ ತರುವುದಿಲ್ಲ.

 

ಅಪರೂಪ ಬರೆಯುವುದು

ಮಹಾಕಾವ್ಯವೇನಲ್ಲ, ನಾಲ್ಕು ಹರಕು ಸಾಲು.

ಕೈಕಾಲೆಳೆದು ಜಗ್ಗಿದರೆ, ಲೊಟಲೊಟ ನೆಟ್ಟಿಗೆ ಬಂತು.

ಮೈ ನೆಟ್ಟಗುಂಟು. ಬುದ್ಧಿ ಮಿತಿಮೀರಿದುದು.

ಉದಾಹರಣೆಗಿದೊಂದು.

 

ಉದ್ದವಾದಷ್ಟು ಸೊಂಟನೋವು ಜಾಸ್ತಿ.

ಮೈಮುರಿದರೆ, ಕೀಲು ಮಧ್ಯದ ಗಾಳಿ

ಬಾಯಲಿ ಆಕಳಿಸುವುದುಂಟು‌.

 

ಸಣ್ಣಪುಟ್ಟದು ನನಗೇ ಬಿಟ್ಟದ್ದು.

ಉದ್ದದ ನಿರ್ಧಾರ ಉದಾಸಿನದ್ದು.

 

ಬರಿಯ ವಿದ್ಯಾರ್ಥಿ, ಬೇರೆ ಕೆಲಸವಿಲ್ಲ.

ಪರಿಚಯ ಮಾಡುವುದೂ ಕಷ್ಟ.

ಪದದಲಿ ಮುಗಿಯುವುದಿಲ್ಲ.

ನಿಮ್ಮ ಹೆಸರು ತಿಳಿಯಲಿಲ್ಲ.

 

ದಾರಿಯಲಿ ಸಿಕ್ಕ

ನಗುತ್ತಿದ್ದ ಮೂತಿ

ಖುಷಿತತ್ವದ್ದು-

ಗಂಟು ಬಿಚ್ಚಿ

ಬೇಸರ ಬಂತು.

 

ನಮ್ಮೂರಲಿಲ್ಲ ಸಹೃದಯ.

ಏನು ಮಾಡಿದರೇನು!

ನನಗಾಗಿ ಅದೆಷ್ಟು ಖುಷಿ ಬೇಕು!

 

ಕಿವಿಗೆ ಸಂಗತಿಯಿದೆ, ಬೇಡ ಸಂಗೀತ.

ಕಣ್ಣೆದುರೇ ಪ್ರಕೃತಿ, ಮೊಬೈಲು ಕೈಲಿ.

ಬಾಡಿಗೆ ಯೋಚನೆ ಬೇಕೆ? ಮಿದುಳಿದೆ ಸ್ವಂತದ್ದೆ.

ಹೇಳುವುದೇನು ಬೇಡ.

ಹೇಳುವುದನೆಲ್ಲರು ಇಷ್ಟಪಡುವುದಿಲ್ಲ.

ಹಾಗಾದರೆ ಮಾಡುವುದೇನು?

 

ಒಂದೇ ಧ್ಯೇಯ, ವ್ಯಭಿಚಾರಿ ವೃತ್ತಿ.

ಇತ್ತಿಂದೆತ್ತ ಹಾರುತ್ತದೆ ತಿಳಿಯದ

ಗೊಂದಲ ಸಾಮ್ರ್ಯಾಜ್ಯದಧಿಪತಿ.

ನಮಸ್ಕಾರ, ನಾನು ಸುಶ್ರುತ.

ಗೊತ್ತಲ್ಲ?

 


ಸ್ವ-ಭಾವಚಿತ್ರಣ

(Self portrait)                1 June 2021


bottom of page