top of page
ಯಾವ ನಾಯಿ ಬಂದರೂ
ಜೊಲ್ಲು ಸುರಿಸುತ್ತಾ
ನಿಷ್ಠೆ ನೆನಪು ಬಂದು
ಬಾಲ ಅಲ್ಲಾಡುತ್ತದೆ.
ಬಂದ ನಾಯಿಯ ದೂರ ಕಳಿಸಲು
ಚೆಂಡು ಎಸೆಯಬೇಕು
ಅಥವಾ ಕಲ್ಲು.
ಮಾವಿನಮರವಾದರೆ ಏಟು ತಿಂದು
ಹಣ್ಣು ಕೊಟ್ಟೀತು.
ನಾಯಿ ಬರಿಯ ಬೊಗಳುತ್ತದೆ.
ಕಚ್ಚುವುದಿಲ್ಲ.
ನನಗೆ ಕಚ್ಚುವುದು ಬೇಡ
ಬೇರೆಯವರಿಗೆ ಹೇಳಿದ್ದು.
ಮೂಲೆಯಲಿ ಬಿದ್ದಿರುತ್ತದೆ
ಸಂಕೋಲೆ ಬಿಗಿದರೆ-
ನಶೆಯೇರಿದಾಗ ಪರಲೋಕ ಸುತ್ತುತ್ತದೆ.
ಪುನಃ ಇಹಲೋಕ ನೆನಪಾಗಲು
ಸದ್ದಾಗಬೇಕು.
ಸಣ್ಣಸದ್ದಿಗೆ ಕಿವಿಯಷ್ಟೆ ನೋಡುತ್ತದೆ.
(ಸೂರ್ಯಕಾಂತಿಯ ಉದಾಹರಣೆ
ಕೊಡಬಹುದಿತ್ತು, ಬೋರಾಗಿದೆ)
ಭಯವಾದಾಗ ಮಾತ್ರ ತಲೆ ತಿರುಗುತ್ತದೆ.
ಸಾಕಿದ್ದಾದರಷ್ಟೆ ಸಂಕೋಲೆ.
ತಿರುಗಾಡಿಗಳಿಗೆ ಅದೇ ಜೋಕು
ಹೊಟ್ಟೆ ಹೊರಗೂ ಹುಣ್ಣಾಗುವಷ್ಟು
ಬೊಗಳುತ್ತವೆ.
ನನಗೊಂಥರ ಹೆಮ್ಮೆ, ನನ್ನ ನಾಯಿ
ಸಂಕೋಲೆ ಬಿಚ್ಚುವುದ ಕಲಿತಿದೆ
ಹೇಳಿಕೊಡದೆಯೇ.
ತಿರುಗಾಡಿಗಿಂತ ನನ್ನ ನಾಯಿ ಮೇಲು.
ಚೆಂಡು ಕೆಲವೊಮ್ಮೆ ಮತ್ತೆ ಬರುತ್ತದೆ
