top of page
ಕತೆ ಹೇಳುತ್ತೇನೆ ಕೇಳಿ
ಕಟ್ಟಿದ್ದಾದರೂ ಸತ್ಯ.
ಸಾಕ್ಷಿ ಆಧಾರಗಳಿಲ್ಲದೆ
ಒಂದು ಮಾತೂ ಆಡುವುದಿಲ್ಲ.
ಪುಟಗಟ್ಟಲೆ ಓದಿ
ಅಧ್ಯಯನ ಮಾಡಿ
ಸತ್ಯ ತಿಳಿಯಿತು.
ದೃಷ್ಟಿದೋಷವಿತ್ತು
ಎರಡರಲ್ಲೂ!
ದೂರದ್ದು ಕಾಣುತ್ತಿರಲಿಲ್ಲ
ಕನ್ನಡಕ ಬೇಕಾಯ್ತು.
ಯಾರೂ ಹೇಳದ್ದು
ತಿಳಿದೂ ಮುಚ್ಚಿಟ್ಟದ್ದು
ಸುಳ್ಳು ಹೇಳಿ ನಂಬಿಸಿದ್ದು
ಸ್ಪಷ್ಟವಾಗಿ ಕಾಣುತ್ತದೀಗ.
ಕೆಟ್ಟಿದೆ ನಮ್ಮ ಗ್ರಹಚಾರ
ಸತ್ಯ ತಿಳಿದರೆ ಶಾಕ್ ಆಗ್ತೀರ!
ಬರಿಕಣ್ಣಿಗೆ ಚುಕ್ಕಿಯಂತೆ ಕಾಣುವ
ದೂರದಲಿ, ದೊಡ್ಡಗಾತ್ರದ
ಹೆಸರಲಿ, ದೊಡ್ಡತನವ
ಮೆರೆದ ಗ್ರಹದ ಸುತ್ತಲಿದೆ
ದಪ್ಪದ ಜನಿವಾರ!
ಬುಧ ಶುಕ್ರಗಳು
ಬಿಸಿಗೆ ಮೈಯೊಡ್ಡಿ
ಬೇಯುತಿರಲು
ತಂಪಿನಲಿ ತಣ್ಣಗೆ
ಕುಳಿತುಂಡ ಶನಿಗುರುವಿಗೆ
ನಮ್ಮ ಧಿಕ್ಕಾರ.
ಕಟ್ಟುಕತೆ 26 ಜುಲೈ 2021
bottom of page
