top of page
ಕರಕರ ಕರೆಯುವ
ಕಪ್ಪೆಗಳ ಕಿರಿಕಿರಿಗೆ
ಪಿರಿಪಿರಿ ಮಳೆಯೊಗ್ಗರಣೆ
ಕರಿತುಂಬಿದೀsರುಳಿನಲಿ
ಗೊರಗೊರ ಗೊರಕೆಯ
ಬಾಯಿಗೆ ಕೆರತುರುಕಿ
ಕರದಲಿ ಕೆಸರಿರಿಸಿದವರಾರು
ಕರಿತುಂಬಿದೀsರುಳಿನಲಿ
ಕೈಗಳಲಿ ಹೊದಕೆಯೆಳೆದು
ಕಾಲಲೊದೆದು ಕಾಲಕಳೆಯಲು
ಪಿಳಿಪಿಳಿ ಹೊಳಿವ ಕಣ್ಗಳಾಕೆ
ಕರಿತುಂಬಿದೀsರುಳಿನಲಿ
ಮನಸೆಳೆವ ಕನಸಿಳಿವ
ವೇಳೆಯಲಿ ಬಳೆತೊಟ್ಟ
ಅವಳ್ಯಾಕೆ ಇಲ್ಲಿಹಳು
ಕರಿತುಂಬಿದೀsರುಳಿನಲಿ
ಅಂಗಳದಿ ಬೆಳಕಿಲ್ಲ
ತಿಂಗಳ ಹೂಗಳರಳಿಲ್ಲ
ಕಳೆಕತೆಗಳು ತಿಳಿದಿಲ್ಲ
ಕರಿತುಂಬಿದೀsರುಳಿನಲಿ
ಕರಿರಾತ್ರಿ 15 July 2020
bottom of page
