top of page
ಎಷ್ಟು ಅಡಗಿದರೇನು ಬಂತು
ಕಣ್ಣಿಗೆ ಕಾಣಲೇಬೇಕು.
ಐದು ಆರು ಏಳು…
ಇನ್ನೇನು ಬಂದೇಬಿಟ್ತು ಹತ್ತು.
ಇದ್ದಾಳೆ ಇಲ್ಲೇ ಸುತ್ತಮುತ್ತ
ತಿರುತಿರುಗಿ ನನ್ನೇ ನೋಡುತ್ತಾ
ಕಾಣೆಯಾದಾಗ ನಿಟ್ಟುಸಿರು ಬಿಟ್ಟು
ನಾ ಹಿಡಿವುದನ್ನೇ ಕಾಯುತ್ತಾ.
ದೊಡ್ಡವರಾದಮೇಲೆ
ಕಣ್ಣಾಮುಚ್ಚಾಲೆ ಬಲು ಸುಲಭ.
ಮೂಗು ಕಣ್ಣು ಬ್ಯಾಗು
ಮತ್ತು ಜುಟ್ಟು ಬದಲಿಸಿದರೆ
ದಾರಿಬದಿಯಲ್ಲಿ
ಯಾರದ್ದೋ ಬೈಕಿನಲ್ಲಿ
ಬಸ್‌ಸ್ಟಾಂಡ್‌ನಲ್ಲಿ
ಎಲ್ಲೆಲ್ಲೂ ಅವಳೇ ಸಿಗುತ್ತಾಳೆ.
ಹಿಡಿದರಾಯ್ತು ಅಂದುಕೊಂಡು
ಕಾಲಕಳೆಯುವುದು
ಬೇಸರ ಬರುವ ತನಕ.
ಕಣ್ಣಾಮುಚ್ಚಾಲೆ 16 Oct 2021
bottom of page
