top of page
ತಲ್ಲಣದ ಕಲ್ಲ
ಇಲ್ಲವಾಗಿಸಬಲ್ಲವ
ಬರಲಿಲ್ಲ ಕರೆದಾಗ ಕಳ್ಳ
ಒಲ್ಲೆನೆಂದರೂ ನನ್ನೆಲ್ಲೆಯ
ನಲ್ಲೆಗೆ ಬಲ್ಲೆನೆಂದು
ಮೆಲ್ಲೆನೆಯೆ ಹೇಳಿದ್ದನು ಸುಳ್ಳ
ಅಲ್ಲ ಅವನು ಬಲ್ಲವನಲ್ಲ
ಎಂದೆಲ್ಲ ಹೇಳಲಾಗಿಲ್ಲ
ನನ್ನಲ್ಲೆಗವೆಲ್ಲ ಗೊತ್ತಿಲ್ಲ
ನನ್ನಲ್ಲೆ ಸೊಲ್ಲೆನಾ
ನಾ ನನ್ನೆಲ್ಲೆಗೆ ಸಲ್ಲದ
ಆಲೋಚನೆಗಳೆಲ್ಲವ ಮೆಲ್ಲ
ನನ್ನೆಲ್ಲೆಯ ನನ್ನಲ್ಲೆ
ಹೇಳಲೊಲ್ಲೆ ನಾಬಲ್ಲ
ನನ್ನೆಲ್ಲವ ನನ್ನಲ್ಲೆ
ಇನ್ನೆಲ್ಲಿ ಹೇಳಲಿ
ನಾನಲ್ಲಿ ನಿನ್ನಲ್ಲಿ
ನಾನಿಲ್ಲಿ ತಿಳಿದಿಲ್ಲವಲ್ಲೆ
ನನ್ನಲ್ಲೆ ಬಿಡಲಿಲ್ಲ
ಛಲವಿಲ್ಲ ನಮಗೆಲ್ಲ
ತಲ್ಲಣವಿಲ್ಲದಾಗಿಸಬೇಕಲ್ಲ
ಹೇಳಿಲ್ಲ ಕೇಳಿಲ್ಲ
ಕರೆದಲ್ಲ ಬರಲಿಲ್ಲ
ಸದ್ಯ! ಒಲ್ಲೆನೆಂದನಲ್ಲಾ ಕಳ್ಳ.
ಕಳ್ಳತಲ್ಲಣ 13 June 2020

bottom of page
