top of page
ದಾರಿ ತಪ್ಪಿತ್ತು.
ತಿರುಗಿ ಮುರುಗಿ
ಗಲ್ಲಿ ಗಲ್ಲಿಗಳ
ಗುಂಡಿ ಗುರುಂಪುಗಳ
ಪರಿಚಯ ಮಾಡಿ ಮಾತನಾಡಿ
ವಿಷಯ ಖಾಲಿ.
ಹಾ, ಮರೆತಿದ್ದ ದಾರಿ
ನೆನಪಿಗೆ ಬಂತು
ಸೇರಿದ್ದು ಅದೇ ದಾರಿ, ಗ್ಯಾರಂಟಿ
ಜಾಗ ಬೇರೆ, ಕಳೆದದ್ದು ಇಲ್ಲಲ್ಲ.
ಮುಂದೆಯೋ? ಹಿಂದೆಯೋ?
ಈಗ ಮುಂದೆಗೋ? ಹಿಂದೆಗೋ?
ಹೋಗಬೇಕಾದ್ದೆತ್ತ?
ಎಷ್ಟು ದೂರ? ಯಾವ ದಿಕ್ಕು?
ಸೂರ್ಯ ಎಲ್ಲಿ?
ಗಂಟೆ ಹನ್ನೊಂದು!
ನಿಂತಿದ್ದೆ ಅಲ್ಲೇ ಸ್ವಲ್ಪ ಹೊತ್ತು
ನೋಡುತ್ತ ಸುತ್ತಮುತ್ತ
ಕೇಳಿದರೆ ಒಬ್ಬ ದಾರಿಹೋಕನತ್ತ
'ಸರ್, ಉತ್ತರ ಎಲ್ಲಿ ಬರುತ್ತೆ?'
'ತಿಳಿಯದು ನಾನೂ ಹೊಸಬ'.
ಹೆಸರಿಲ್ಲದ ದಾರಿ 18 Feb 2021
bottom of page
