top of page

ಗಾಳಿ ದೂರದ್ದು

ಜೋರು ಸದ್ದು

ಬಡಿತ ಹೃದಯದ್ದು.

 

ಬಂತು ಹತ್ತಿರ

ಕೇಳದೆ ಎತ್ತರ

ಮಳೆಯ ಜೊತೆಗೆ

ದಡಬಡನೆ‌.

 

ಭುಸಕ್ಕನೆ ಬಿತ್ತು

ಮನೆಯ ಒಳಗೆ

ಡಬಡಬ ಕಿಟಕಿ

ಯ ಹೊರಗೆ ಇಣುಕಿ

ಕುಳಿತು ಕುಂಡೆ ಜಾರಿಸಿ

ಮನಸ್ಸು ಕೇಳಿತು

ಬೇಕಾ ಬಾಯಾರಿಕೆ?

 

ಅರ್ಧ ಲೋಟ ಬಿಸಿ ಚಾಯ

ಕರುಕುರು ತಿಂಡಿ ಸಲೂಪ

ಚಳಿಗೆ ರುಚಿ ಜಾಸ್ತಿ ಹಹ್ಹಾ.

 

ನಾಡಿದ್ದು ತಿಥಿಯೂಟ

ಬರಬೇಕು ಜೊತೆಗೂಡಿ

ತೀರಿದೆ ಇನ್ನೊಂದು ಮೋಡ!

ಸಾವಿರ ಮಳೆಹನಿಯ

ಕೊನೆಗಾಲದಾರ್ತನಾದ

ಕೇಳದು ಗೇಣಂತರದಿ

ಬಡಿದು ಕರಗಿದ ಹೃದಯ.

 

ಸರಿ ಸರಿ ಬರುತ್ತೇವೆ ನಾವು

ಹೊತ್ತಾಯಿತು

ಮುಂದಿನ ಮನೆಗೆ ಹೋಗಬೇಕು

ಸಮಯ ನಾಲ್ಕಾಯಿತು.

 


ಹೇಳಿಕೆ                       23 Sept 2020



bottom of page