top of page

ಕಪ್ಪೆ ಕಂಡ ಹಾವೊಂದು

ಸರಸರನೆ ಹರಿದು ಬಂದು

ದರ ನೋಡಿದ ಹಕ್ಕಿಗಳ

ಕೀ ಕೀ ಕೇಕೆಗಳು ಶುರುವಾಯ್ತು.

ಕಿಟಕಿ ಬಳಿಯಲಿ ಕುಳಿತು

ಕವನ ಬರೆಯಲು

ಕೂಗಿ ಹೇಳುವುದು ಕೇಳುತಿತ್ತು.

 

ಹುಳಗಳ ಹುಡುಕಿ ತಿಂದ ಹಕ್ಕಿಗೆ

ಪಾಪದ ಕಪ್ಪೆ ಸಾಯುದು ಬೇಡವಿತ್ತು.

ಹೇಳದುಳಿದ ಕಪ್ಪೆಯ ಮಾತುಗಳ

ತಾನೇ ಗಂಟಲು ಬಿಚ್ಚಿ ಸಾರುತಿತ್ತು.

 

ಕೊನೆಯ ಗಳಿಗೆಲಿ ತನ್ನ ಸ್ಮರಿಸಿದ

ಹಕ್ಕಿಗೆ ವಿದಾಯ ಹೇಳಬಯಸಿತ್ತು.

ಹಸಿದ ಹಾವಿನ ಹೊಟ್ಟೆದಾರಿ

ಖಾಲಿ ಜಾರುಬಂಡಿಯಂತಿತ್ತು.

 

ಇತ್ಯಾದಿ ಇತ್ಯಾದಿ ವರದಿ ಮುಗಿಸಿ

ಸುತ್ತಮುತ್ತ ನೆರೆದವರ ನೋಡಿ

ಹಕ್ಕಿ ಹಾರಿ ಹೋಯಿತು.

ಉಬ್ಬಿದೊಟ್ಟೆಯ ಹಾವು ತಿರುಗಿ

ನಡೆಯಲು ಬಾಲದ ಬಳಿ

ಬೆಕ್ಕು ನಿಂತದ್ದು ತಿಳಿಯಿತು.

ಹಾವು                  15 June 2021


bottom of page