ಕಣ್ಣುಮುಚ್ಚಿ ಮಲಗಿದ್ದೆ ನಾ.
ಟಿಕ್ ಟಕ್ ಟಿಕ್ ಟಕ್ ಟಿಕ್ ಟಕ್
ಗುಸುಗುಸುಗುಸುಗುಸು
ಗುರ್್ರ್್ರ್್ರ್್ರ್್ರ್್ರ್
ಪುಳ್ಕ್
ಅರ್ರೇ ಇದ್ಯಾವುದು?
ಫ್ಯಾನ್ ಗುಸುಗುಟ್ಟುತ್ತಿದೆ. ಫ್ರಿಡ್ಜ್ ಗುರುಗುಟ್ಟುತ್ತಿದೆ.
ಗಡಿಯಾರ ಲೆಫ್ಟ್ ರೈಟ್ ಮಾಡ್ತಾ ಮನೆ ಕಾಯ್ತಿದೆ.
ಈ ಪುಳ್ಕ್ ಯಾವುದು?
ಗಾಳಿಗೆ ಮನೆಯ ಬಾಗಿಲು ಚಿಟಿರ್್ರ್್ರ್ ಅಂತು.
ಅದೇನ್ ಮನೆಕಾಯ್ತಿದೆಯೋ ಈ ಗಡಿಯಾರ! ಗಾಳಿಗ್ ಬರೋಕ್ ಬಿಟ್ಟಿದ್ ಯಾರು!
ಟಿಕ್ ಟಕ್ ಟಿಕ್ ಟಕ್ ಟಿಕ್ ಟಕ್
ಸರಿ ಕಣಪ್ಪಾ
ಪುಳ್ಕ್
ಗುಸುಗುಸುಗುಸುಗುಸು
ಥೂ!! ಈ ಪುಳ್ಕ್ ಎಲ್ಲಿಂದಪ್ಪಾ!
ಪುಳಕ್ಕ್
ಆss!
ಯಾವುದೋ ಒಂದು ಪದ್ಯ ಶುರುವಾಯ್ತು.
ಓಹ್! ಇದು ನಮ್ಮ ಜುಕರ್ ಬರ್ಗ್‌ದು.
ಪುಳ್ಕ್
ಸರಿ ಹೋಯ್ತು.
ಟಿಂಗ್
ಏನಪ್ಪಾ ನಿಂದು?
ದೂರದಲ್ಲೆಲ್ಲೋ ಕಾಕಾಕಾ ಎನ್ನುತ್ತಾ ಕಾಗೆ ಹಾರಿತ್ತು.
ಹಹ್ಹಹ್ಹಹ್ಹಾ
ಟಿಂಗ್
ಏ!
ಟಿಂಗ್
ಟಿನ್
ಪುಳ್ಕ ್ ಪುಳ್ಕ್
ಪುಳಕ್
ಗುಸುಗುಸುಗುಸುಗುಸು
ಟಿಕ್ ಟಕ್ ಟಿಕ್ ಟಕ್ ಟಿಕ್ ಟಕ್
ಪುಳ್ಕ್
ಏ..ಥೋ! ಏನೋ ಬಾಧೆ! ಮಲಗಬೇಕೂಂತ ತಾನೆ ಬಿದ್ದಿರೋದಿಲ್ಲಿ!
ಪುಳ್ಕ್
ಚಿಟಿರ್್ರ್್ರ್
ಲೋ ಗಡಿಯಾರ. ಸರಿಯಾಗಿ ಕಾಯೋ ಮಾರಾಯ.
ಟಿಕ್ ಟಕ್ ಟಿಕ್
ಹ್ಞಾಂ! ಗೊತ್ತುಗೊತ್ತು. ಟಿಕ್ ಟಕ್ ಟಿಕ್ ಟಕ್ ನಿಂದು.
ಗುರ್್ರ್್ರ್್ರ್
ಕಿಟ್ರೀsss ಕಿಟ್ರ್‌ಕಿಟ್ರ್‌ಕಿಟ್ರ್ ಕಿಟ್ರೀssss
ಅಬ್ಬಾ! ಇವೇ ಪರವಾಗಿಲ್ಲಪ್ಪ. ಈ ಪುಳ್ಕ್ ಸುಳ್ಕ್‌ಗಿಂತ.
ಠಪ್!
ಗುಂಯ್‌ಯ್್್್‌ಯ್
ಫಟ್!
ಟಕಟಕಟಕಟಕ್ರ್್ರ್
ಪುಳ್ಕ್
ಹ್ಞಾಂ! ಕುರ್ಚಿ.
ಸುಯ್‌ಸುಂಯ್‌ಶುಂಯ್
ಇವ್ರದ್ದೊಳ್ಳೆ ಮಜಾ. ಒಂದು ಸುಯ್ ಅನ್ನುತ್ತೆ. ಇನ್ನೊಂದು ಕಿಟ್‌ಕಿಟ್‌ಕಿಟ್ರೀ ಅನ್ನುತ್ತೆ.
ಕಿಟ್‌ಕಿಟ್‌ಕಿಟ್ಕಿಟಿಕಿಟಿಕಿಟಿಕಿಟಿ
ಟಿಕ್ ಟಕ್ ಟಿಕ್ ಟಕ್
ಗೊತ್ತಪ್ಪಾ. ನೀ ಚೆನ್ನಾಗ್ ಕಾಯ್ತಿದ್ದೀಯ. ಆಗಾಗ ತೋರಿಸ್ಕೋಬೇಡ.
ಟಿನ್
ಪುಳ್ಕ್
ಟಿನ್ ಟಿಂಗ್
ಅಯ್ಯೋ! ಮುಗಿಲಿಲ್ವಾ ಇನ್ನೂ!
ಪುಳ್ಕ್.
ಗೊರ್ಗೊರ್ಗೊರ್ಕೆ 30 May 2020

