.............................................
ಪಾಪ! ಕಣ್ಣುಗಳು
ಊರತುಂಬ ಹುಡುಕುತ್ತವೆ
ಕಿವಿ ಕಾಣುವುದಿಲ್ಲ
ಬಾಯಿಚಪಲ ಮುಗಿಯುದಿಲ್ಲ.
.............................................
ಎಲ್ಲರಿಗೂ ಗೊತ್ತು
ಒಳ್ಳೆಯದು ಯಾವುದು
ಅದದನ್ನೇ ಹೇಳುವುದು ಸುಮ್ಮನೇ
ಉಪಯೋಗಕ್ಕಿಲ್ಲ.
.............................................
ಕಲೆಯೆಂದರೆ ಕವಿತೆ
ಯ ಪಕ್ಕ ಕೈಕಟ್ಟಿ
ನಿಲ್ಲುವ ವಸ್ತು ಮಾತ್ರವಲ್ಲ.
.............................................
ಕಲೆಗೆ ಬೆಲೆ ಕಟ್ಟಲಾಗದು ಎಂದು ಅವರಜ್ಜ
ಎಲ್ಲವೂ ಕಲೆಯೇ ಎಂದರು ಇವರಜ್ಜ
ಬಿಟ್ಟಿ ಜೀವನವೇ ಲೇಸು ಎಂದರಂತೆ ಸರ್ವಜ್ಞ!
.............................................
ಅಲ್ಪಜ್ಞಾ ನದ ದುರ್ಬೀನು
ಉಲ್ಟಾ ಹಿಡಿದರೆ
ದೊಡ್ಡವರೂ ಸಣ್ಣವರು.
.............................................
I can make you
Laugh if you can
Understand my joke.
.............................................
ಅಲ್ಲೇನಿದೆ ನಿನ್ನ ನೆನಪ ಬಿಟ್ಟು!
ಮತ್ತೆ ಮತ್ತೆ ಹೋಗುವಂತಹ
ತಾಣವೇನಲ್ಲ. ಪ್ರವಾಸಿಗರು ಬರುತ್ತಾರೆ ಒಂದಷ್ ಟು.
ಅವರಿಗೂ ನಿನ್ನ ನೆನಪು ಮಾಡದಿರಲಾಗುವುದಿಲ್ಲ.
.............................................
ಎಷ್ಟು ತಿಂಗಳ ಬಾಡಿಗೆ
ಮೊಲೆಯುಣಿಸಿದಕೆ
ಮನದ ಮೂಲೆಯಲಿ
ಕುಳಿತು ಬೆಚ್ಚಗೆ, ನೆನಪಿಗೆ.
.............................................
Make an effort
No matter what.
You think, observe
Even when you can't
Coz, that's just a thought.
That's a thought
I repeated-ly think about
To push myself and others
Together to gather
Strength and weakness
Beyond ourselves.
.............................................
ಒಂದು, ಜೊತೆ ಇನ್ನೊಂದು
ಪಕ್ಕದಲಿ ಮತ್ತೊಂದು
ಇಟ್ಟು ದೂರಸರಿದರೆ ಮತ್ತದೇ ಒಂದು.
ಹೊಸೆದುದು ಹೊಸದೊಂದು.
.............................................
I couldn’t decide
Whether to let you
See this or not.
.............................................
An old painting,
Yet, not s(o) old.
.............................................
Hiding under the closet
Hoping someone would
Find the treasure.
.............................................
ಕಂಡ ಚಂದದ ಚಂದಿರನ
ದರದರನೆಳೆದು ನಿಂದ ಕಣ್ಣೆದುರೆ
ಅರೆಬರೆ ತೊಟ್ಟುಡುಗೆ ಪಡೆದುಡುಗೊರೆ
ಮತ್ತೇರಿದಾ ಕುದುರೆ.
.............................................
ಪದದ ನಾದದಲಿಹುದು ವ್ಯಂಗ್ಯ
ಪದದೊಳಾರ್ಥದಲಿ ಗಾಂಭಿರ್ಯ
ನಾದಪದದರ್ಥಗಳ ಪದಾರ್ಥ ಬೆಂದಾಗ
ಬಾಯಿಗೆ ಪದದಾಟ ಬಾಡೂಟ.
.............................................
ಸಾರಮೇಯ ಎಂದರೆ ನಾಯಿಯಂತೆ.
ಇದೂ ಹೋದಲ್ಲೆಲ್ಲ ಹಿಂಬಾಲಿಸಿದರೆ ಸಾಕು.
.............................................
ಧರ್ಮಮಾರ್ಗವದು
ಭೂತಕನ್ನಡಿಯಲ್ಲಿ ನೋಡಿದರೆ
ಒಂದೆರಡು ಹೊಂಡಗಳು.
.............................................
ಬಿಂದು ಕಾಣದಿಂದು ಹಣೆಯಲಿ
ಮಿಂದು ಬಂದು ನಿ ಂದ ಮುಗಿಲಲಿ
.............................................
ಯಾಕೆ ನನ್ನ ತಲೆಕೆಡಿಸಿದಳು!
ಪ್ರಶ್ನೆ ಮಾರ್ಗವನ್ನೇ ಕೆಡವಿದ್ದಳು!
ಉತ್ತರ ದಿಕ್ಕಿನೆಡೆಗಿನ ಪಯಣಕ್ಕೆ
ಮಾರ್ಗವೇ ಇಲ್ಲದಾಗ ಸಿಕ್ಕಿದ್ದಳು ಯಾಕೆ?
.............................................
ಬಿಡಿಬಿಡಿಜೋಡಿ 2021-22