top of page
ಕಣ್ಣಂಚಿನ ಪಸೆ ಹೇಳುತಿದೆ
ಎದೆತುಂಬ ನೀರಿದೆ
ಬಾರದು ಗಂಟಲ ಮೇಲ್ಗಡೆ
ಒಣಗದೆ.
ರಾತ್ರಿ ಹೊತ್ತಿಗೆ
ಚಂದ್ರನ ಶಕ್ತಿಗೆ
ಅಲೆ ಹೆಚ್ಚಿಗೆ
ಆಗುತಿದೆ
ಅದರೆ
ಸೂರ್ಯ ಬಂದರೆ
ನೀರಿಳಿಯದೆ
ಎದೆ ತುಂಬಿದೆ.
ಹಗುರ ದೇಹ, ತಲೆ ಭಾರ
ಇವೆರಡರ, ನಡು ಸಿಲುಕಿದೆ
ಈ ನೀರ ಭಾವ, ಅಭಾವ.
ಹನಿ ಹನಿ ಉದುರುವುದು
ಆಕಾಶದಿಂದಿಳಿದು
ತಲೆ ಎತ್ತಿ ನೋಡಿದರೆ
ಒಂದೇ ಬಿಂದು.
ಆದರೆ, ಬೀಳುತಿಹುದು!
ಸಾವಿರಾssರು
ಎ ಬ
ದು ದು
ರು ರು
ಏನೇ ಆದರೂ
ಕಣ್ಣದುರಿದರೂ
ಬಿದಿರು ಅಕ್ಕಿಗಟ್ಟಿದರೂ
ಆರದು ಪಸೆ, ಒಂದು ಚೂರೂ.
! 30 Sept 2020
bottom of page
